Log In


ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮಹದೇಶ್ವರಬೆಟ್ಟ


ಪೀಠಿಕೆ:

1.ದೇವಸ್ಥಾನದ ಸಂಕ್ಷಿಪ್ತ ಇತಿಹಾಸ ಹಾಗೂ ಧಾರ್ಮಿಕ ದತ್ತಿ ಇಲಾಖೆಗೆ ಹಸ್ತಾಂತರಗೊಂಡ ಬಗ್ಗೆ.

ಶ್ರೀ ಮಲೆ ಮಹದೇಶ್ವರಸ್ವಾಮಿ ದೇವಾಲಯವು ಪರಮ ಪವಿತ್ರವಾದ ಧಾರ್ಮಿಕ ಕ್ಷೇತ್ರವಾಗಿದ್ದು, ಪುರಾತನ ಕಾಲದಿಂದಲೂ ಪ್ರಖ್ಯಾತಿ ಪಡೆದಿರುತ್ತದೆ.


"ನಿರಂಜನವಂಶರತ್ನಾಕರದ ಪ್ರಕಾರ ನಿರ್ಮಾಯ ಗಣೇಶ್ವರರೇ ಶ್ರೀಮಲೆ ಮಹದೇಶ್ವರರು "


ಜನಪದ ಮಹಾಕಾವ್ಯಗಳಲ್ಲಿ ಉಲ್ಲೇಖಿಸಿರುವಂತೆ ಶ್ರೀ ಚಂದ್ರಶೇಖರಮೂರ್ತಿ ಮತ್ತು ಉತ್ತರಾಜಮ್ಮರವರ ದಂಪತಿಗಳ ಪುತ್ರರಾದ ಶ್ರೀ ಮಲೆ ಮಹದೇಶ್ವರರು ಕೈಲಾಸದಿಂದ ಧರೆಗೆ ಅವತರಿಸಿ ಬಂದು ಮೊದಲಿಗೆ ಶ್ರೀ ಶೈಲದ ಮಲ್ಲಿಕಾರ್ಜುನ ಲಿಂಗದ ಬಳಿ ಕಾಣಿಸಿಕೊಂಡರೆಂದು ಸುಮಾರು 600 ವರ್ಷಗಳ ಹಿಂದೆ ಈ ಬೆಟ್ಟಕ್ಕೆ ಶ್ರೀ ಮಹದೇಶ್ವರರು ಶ್ರೀಶೈಲ ಕ್ಷೇತ್ರದ ಕಡೆಯಿಂದ ಸುತ್ತೂರು, ಕುಂತೂರು, ನಂತರ ಏಳು ಮಲೆಯ ನಡು ಮಲೆಗೆ ಬಂದರೆಂದೂ, ಈ ಪ್ರದೇಶವು ತಮ್ಮ ತಪಸ್ಸಿಗೆ ಬಹಳ ಯೋಗ್ಯವಾದುದೆಂಬುದನ್ನು ಕಂಡು ಈಗ ಹಾಲಿ ಇರುವ ದೇವಾಲಯದ ಪ್ರದೇಶವನ್ನು ತಮ್ಮ ತಪೋ ಭೂಮಿಯಾಗಿ ಆರಿಸಿದರೆಂದೂ, ಇವರು ಬಾಲಯೋಗಿಯೂ, ಈಶ್ವರನ ಅವತಾರವೆಂತಲೂ, ಮಹದೇಶ್ವರರು ಹುಲಿಯನ್ನು ತಮ್ಮ ವಾಹನವಾಗಿಟ್ಟುಕೊಂಡು ಬೆಟ್ಟಗುಡ್ಡಗಳಿಂದ ಸುತ್ತುವರಿಯಲ್ಪಟ್ಟ ಪ್ರದೇಶದಲ್ಲೆಲ್ಲಾ ಸಂಚರಿಸಿ, ತಮ್ಮ ಬಾಲ್ಯ, ಯೌವನ, ಮುಪ್ಪಿನ ಕಾಲವನ್ನು ನಡುಮಲೆಯಲ್ಲೇ ಕಳೆಯುತ್ತಾ ಅವರು ತಮ್ಮ ಯೋಗಿಕ ಶಕ್ತಿಯಿಂದ ಅನೇಕ ಮಹಿಮೆಗಳನ್ನು ಪ್ರದರ್ಶಿಸುತ್ತಾ ಅನೇಕ ಪವಾಡಗಳನ್ನು ನಡೆಸಿರುತ್ತಾರೆ.

ಶ್ರೀ ಮಹದೇಶ್ವರರು ಈ ಬೆಟ್ಟದ ಸುತ್ತ ವಾಸವಾಗಿದ್ದ ಬೇಡ ಮತ್ತು ಸೋಲಿಗರ ಜನಾಂಗದವರ ಬದುಕಿನಲ್ಲಿ ಮಹತ್ತರ ಪರಿವರ್ತನೆಯನ್ನು ತಂದು ಶಿವಯೋಗಿ ಸಿದ್ಧಿಯ ಮೂಲಕ ಜನತೆಯ ಕಷ್ಟಕಾರ್ಪಣ್ಯಗಳನ್ನು ಪರಿಹರಿಸಿ ಬೇಡರು ಮತ್ತು ಗುಡ್ಡಗಾಡು ಜನರಿಗೆ ಲಿಂಗಧಾರಣೆ ಮಾಡಿ ಶ್ರೀಸಾಲೂರು ಮಠವನ್ನು ಸ್ಥಾಪಿಸಿ, ಇವರನ್ನು ವೀರಶೈವ ಧರ್ಮಕ್ಕೆ ಮಾರ್ಪಡಿಸಿ, ಈ ಬೇಡಗಂಪಣ ಜನಾಂಗದವರಿಂದಲೇ ದೇವಾಲಯದಲ್ಲಿ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳುವಂತೆ ಅನುಗ್ರಹಿಸಿದರೆಂದು ಮಾನವ ನೆಲೆಯಿಂದ ದೈವತ್ವದ ನೆಲೆಗೇರಿ ಭಕ್ತರ ಹೃದಯ ಮಂದಿರದಲ್ಲಿ ಮಹಾತ್ಮರು ನೆಲೆಗೊಂಡು ಆರಾಧ್ಯ ಮೂರ್ತಿಯಾಗಿ ನಡುಮಲೆಯಲ್ಲಿ ಲಿಂಗರೂಪಿಯಾಗಿ ಪೂಜೆಗೊಳ್ಳುತ್ತಿರುವವರೆ ಶ್ರೀ ಮಲೆಯ ಮಹದೇಶ್ವರರು.

ಅ). ಉಪ ದೇವಾಲಯಗಳು :-

1. ಶ್ರೀ ನಾಗಮಲೆ ಕ್ಷೇತ್ರ, 2.ಆದಿ ಮಾದಪ್ಪ, 3.ಇಂಡಿಬಸವೇಶ್ವರ, 4.ಶ್ರೀ ಶ್ರೀಗೌಜಲತಟ್ಟೆ ಬಸವೇಶ್ವರ. 5. ಶ್ರೀ ಬಾಳೆಕಲ್ಲು ಬಸವೇಶ್ವರ, 6.ಶ್ರೀ ತಪಸ್ ಅರೆ, 7.ಶ್ರೀ ಪಾದದರೆ 8.ಶ್ರೀ ಕಾರಯ್ಯನ ಬೋಳಿ, 9.ಶ್ರೀ ಕಣಿವೆ ಬಸಪ್ಪ ಸನ್ನಿದಿ ಮತ್ತು 10.üಶ್ರೀ ಶೇಷಣ್ಣ ಒಡೆಯರ್ ಗದ್ದಿಗೆ ಸನ್ನಿದಿ

ಆ). ಮಹದೇಶ್ವರಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 18 ಹಳ್ಳಿಗಳು (ಮ.ಬೆಟ್ಟ, ವಡಕೆಹಳ್ಳ, ಆಣೆಹೊಲ,ಕೊಂಬುದಿಕ್ಕಿ, ತೋಕೆರೆ, ದೊಡ್ಡಾಣೆ, ಹಳೇಯೂರು, ಕೀರನಹೊಲ, ಮೆದಗನಣೆ, ಮೆಂದಾರೆ, ಗೊರಸಾಣೆ, ಪಾಲಾರ್, ಪಡಸಲನತ್ತ, ತೇಕಣೆ, ಇಂಡಿಗನತ್ತ, ತುಳಸಿಕೆರೆ, ಕೊಕ್ಕಬರೆ ಹಾಗೂ ಕೊಂಗನೂರು) ಇರುತ್ತವೆ, ಜನಗಣತಿ ಪ್ರಕಾರ 10,676 ಜನಸಂಖ್ಯೆ ಇರುತ್ತದೆ. ಅಂದರೆ ಎಸ್.ಸಿ.ಜನಾಂಗ 1375, ಎಸ್.ಟಿ. ಜನಾಂಗ 675 ಮತ್ತು ಇತರೆ ಜನಾಂಗ 8,626 ಜನಸಂಖ್ಯೆ ಇರುತ್ತದೆ

ಇ). ಈ ದೇವಾಲಯದಲ್ಲಿ ವಾರ್ಷಿಕವಾಗಿ ಈ ಕೆಳಕಂಡತೆ 6 ಜಾತ್ರೆಗಳು ಹಾಗೂ 6 ತಿಂಗಳ ಅಮವಾಸ್ಯೆ.

ಜಾತ್ರೆ ನಡೆಯುತ್ತದೆ ವಿವರ ಈ ಕೆಳಕಂಡಂತೆ ಇದೆ.

ಕ್ರಮ ಸಂಖ್ಯೆ ಜಾತ್ರೆಗಳ ವಿವರ ಜಾತ್ರೆಯಲ್ಲಿ ಬರುವ ಅಂದಾಜು ಭಕ್ತಾದಿಗಳ ಸಂಖ್ಯೆ
1. ಮಹಾಲಯ ಜಾತ್ರೆ ಈ ಜಾತ್ರೆಯಲ್ಲಿ 4 ದಿವಸಗಳಲ್ಲಿ ಅಂದಾಜು 2.00ಲಕ್ಷ ಜನ ಭಕ್ತಾದಿಗಳು ಆಗಮಿಸುತ್ತಾರೆ.
2. ದಸರ ಜಾತ್ರೆ ಈ ಜಾತ್ರೆಯಲ್ಲಿ 9 ದಿವಸಗಳಲ್ಲಿ ಅಂದಾಜು 2.00ಲಕ್ಷ ಜನ ಭಕ್ತಾದಿಗಳು ಆಗಮಿಸುತ್ತಾರೆ.
3. ದೀಪಾವಳಿ ಜಾತ್ರೆ ಈ ಜಾತ್ರೆಯಲ್ಲಿ 5 ದಿವಸಗಳಲ್ಲಿ ಅಂದಾಜು 4.00 ಲಕ್ಷ ದಿಂದ 4.5 ಲಕ್ಷ ಜನ ಭಕ್ತಾಧಿಗಳು ಆಗಮಿಸುತ್ತಾರೆ.
4. ಕಾರ್ತಿಕಮಾಸ ಜಾತ್ರೆ ಕಾರ್ತಿಕ ಮಾಸದಲ್ಲಿ ಕೊನೆಯ 2 ಕಾರ್ತಿಕ ಸೋಮವಾರ ಜಾತ್ರೆಗಳಾಗಿದ್ದು, ಈ ಜಾತ್ರೆಯಲ್ಲಿ ಅಂದಾಜು 2.00ಲಕ್ಷ ಜನ ಭಕ್ತಾದಿಗಳು ಆಗಮಿಸುತ್ತಾರೆ.
5. ಮಹಾಶಿವರಾತ್ರಿ ಜಾತ್ರೆ ಈ ಜಾತ್ರೆಯಲ್ಲಿ 4 ದಿವಸಗಳಲ್ಲಿ ಅಂದಾಜು 5.00 ಲಕ್ಷಕ್ಕೂ ಮಿಗಿಲಾಗಿ ಭಕ್ತಾಧಿಗಳು ಆಗಮಿಸುತ್ತಾರೆ.
6. ಯುಗಾದಿ ಜಾತ್ರೆ ಈ ಜಾತ್ರೆಯ 4 ದಿವಸಗಳಲ್ಲಿ ಅಂದಾಜು 3.5 ಲಕ್ಷದಿಂದ 4.00 ಲಕ್ಷ ಜನ ಭಕ್ತಾಧಿಗಳು ಆಗಮಿಸುತ್ತಾರೆ.


ಮೇಲ್ಕಂಡ 5 ಅಮವಾಸ್ಯೆ ಹೊರತು ಪಡಿಸಿ ಉಳಿದ 7 ಅಮವಾಸ್ಯೆಗಳಲ್ಲಿ ಪ್ರತಿ ಅಮವಾಸ್ಯೆಗೆ 50 ಸಾವಿರಕ್ಕು ಮಿಗಿಲಾಗಿ ಭಕ್ತಾಧಿಗಳು ಆಗಮಿಸುತ್ತಾರೆ.

ಈ) ಪ್ರಧಾನ ಉತ್ಸವ ಮತ್ತು ಜಾತ್ರೆಗಳು:

ಮಹಾಲಯ, ದಸರಾ, ದೀಪಾವಳಿ, ಕಾರ್ತಿಕ ಸೋಮವಾರಗಳು, ಮಹಾಶಿವರಾತ್ರಿ ಮತ್ತು ಯುಗಾದಿ ಜಾತ್ರೆಗಳು.

ರಥೋತ್ಸವಗಳು:- ದೀಪಾವಳಿ, ಮಹಾಶಿವರಾತ್ರಿ ಮತ್ತು ಯುಗಾದಿ ಜಾತ್ರೆಗಳಲ್ಲಿ.

ತೆಪ್ಪೋತ್ಸವಗಳು:- ದಸರಾ, ದೀಪಾವಳಿ, ಕಡೆ ಕಾರ್ತಿಕ ಸೋಮವಾರ, ಆಗಮ ವೀರಶೈವಾಗಮ ರೀತ್ಯಾ ತ್ರಿಕಾಲ ಪೂಜಾ ಪದ್ದತಿ.

ದೇವಸ್ಥಾನದ ಆಡಳಿತ ವ್ಯವಸ್ಥೆ:

ಈ ಮೊದಲು ಸಾಲೂರು ಬೃಹನ್ಮಠದಿಂದ ತಮಿಳುನಾಡು ಸರ್ಕಾರಕ್ಕೆ ಮದರಾಸು ಹಿಂದೂ ರಿಲಿಜಿಯಸ್ ಎಂಡೋಮೆಂಟ್ಸ್ ಆಕ್ಟ್ 1926ರ ವಿದಿ 38 ರ ರೀತ್ಯ ಹಸ್ತಾಂತರ ಪಡೆದಿದೆ. ನಂತರ ಆಗಿನ ಮದ್ರಾಸ್ ಹಿಂದೂ ರಿಲಿಜಿಯಸ್ ಎಂಡೋಮೆಂಟ್ ಆಕ್ಟ್ 1926 (ಮದ್ರಾಸ್ ಆಕ್ಟ್ ಆಫ್ 1927)ರ ವಿಧಿ 57 (1)ರ ರೀತ್ಯ ಮದ್ರಾಸು ಎಂಡೋಮೆಂಟ್ ಬೋರ್ಡನ ನ್ಯಾಯಲಯದಲ್ಲಿ, ಬೋರ್ಡ್ ಆದೇಶ ಸಂ 3794 ದಿನಾಂಕ: 05-07-1951ರಲ್ಲಿ ಈ ದೇವಾಲಯದ ಆಡಳಿತಕ್ಕೆ "ಸ್ಕೀಂ" ರಚನೆಯಾಗಿ ಸದರಿ "ಸ್ಕೀಂ" ನಿಯಮಾವಳಿಯಂತೆ ಹಾಗೂ ನಂತರದ ಪರಿಸ್ಕøತ ಹೆಚ್.ಆರ್ ಅಂಡ್ ಸಿ.ಇ ಕಾಯ್ದೆ 1951ರ ನಿಯಮಾ ವಳಿಗಳ ಪ್ರಕಾರ ಆಡಳಿತ ನಡೆದುಕೊಂಡು ಬರುತ್ತಿದ್ದು, 1956ರ ರಾಜ್ಯಗಳ ಪುನರ್ ವಿಂಗಡಣೆಯ ನಂತರ ಈ ಕ್ಷೇತ್ರವನ್ನು ಅಂದಿನ ಮದ್ರಾಸ್ ಸರ್ಕಾರದಿಂದ ಮೈಸೂರು ಸರ್ಕಾರಕ್ಕೆ ವರ್ಗಾಯಿಸಲ್ಪಟ್ಟಿದ್ದರೂ ಸಹ ಸದರಿ "ಸ್ಕೀಂ" ನಿಯಮಾವಳಿಯಂತೆ ಹಾಗೂ ಹೆಚ್.ಆರ್. ಅಂಡ್ ಸಿ.ಇ ಕಾಯ್ದೆ 1951ರ ನಿಯಮಾವಳಿಗಳ ಪ್ರಕಾರ ಮೈಸೂರು/ಕರ್ನಾಟಕ ಸರ್ಕಾರ ಆಡಳಿತ ನಡೆದುಕೊಂಡು ಬಂದಿರುತ್ತದೆ. ಪ್ರಸ್ತುತದಲ್ಲಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997ನಿಯಮಗಳು 2002ರ ರೀತ್ಯಾ 2003ರ ಮೇ ಮಾಹೆಯಿಂದ ನಿರ್ವಹಿಸಿಕೊಂಡು ಬರಲಾಗುತ್ತಿದ್ದು ಪ್ರಸ್ತುತ ಶ್ರೀ ಮಲೈ ಮಹದೇಶ್ವರ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ಅಧಿ ನಿಯಮ -2013 ಮತ್ತು ಸರ್ಕಾರದ ಅಧಿ ಸೂಚನೆ ಸಂಖ್ಯೆ:ಸಂವ್ಯಶಾಇ/21/ಶಾಸನ/2014, ದಿನಾಂಕ:06-09-20214ರಲ್ಲಿ ಕೆಲವು ತಿದ್ದುಪಡಿಗಳೊಡನೆ ದಿನಾಂಕ:06-09-2014 ರಿಂದ ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವಾಗಿ ಅಸ್ತಿತ್ವಕ್ಕೆ ಬಂದಿರುತ್ತದೆ. ಸನ್ಮಾನ್ಯ ಮುಖ್ಯಮಂತ್ರಿಗಳು ಪ್ರಾಧಿಕಾರದ ಪದ ನಿಮಿತ್ತ ಅಧ್ಯಕ್ಷರಾಗಿರುತ್ತಾರೆ.ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಧಾರ್ಮಿಕ ದತ್ತಿ ಮುಜರಾಯಿ ಇಲಾಖೆ ಸಚಿವರುಗಳು ಉಪಾಧ್ಯಕ್ಷರಾಗಿದ್ದು, ಸರ್ಕಾರದಿಂದ ನೇಮಿಸಲ್ಪಟ್ಟ ಪದ ನಿಮಿತ್ತ ಸದಸ್ಯರುಗಳಿದ್ದು, ದೇವಾಲಯದ ಕಾರ್ಯ ನಿರ್ವಹಣಾಧಿಕಾರಿಗಳು ಪ್ರಾಧಿಕಾರದ ಪದನಿಮಿತ್ತ ಕಾರ್ಯದರ್ಶಿಗಳಾಗಿರುತ್ತಾರೆ.

ಪ್ರಾಧಿಕಾರದ ಅಂಗರಚನೆ:

ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಂಗರಚನೆ


ಶ್ರೀ ಬಸವರಾಜ್ ಬೊಮ್ಮಾಯಿ ಸನ್ಮಾನ್ಯ ಮುಖ್ಯಮಂತ್ರಿಗಳು ಮತ್ತು ಪ್ರಾಧಿಕಾರದ ಅಧ್ಯಕ್ಷರುಶ್ರೀಮತಿ ಶಶಿಕಲಾ ಜೊಲ್ಲೆ ಮಾನ್ಯ ಮುಜರಾಯಿ ಸಚಿವರು ಹಾಗೂ ಪ್ರಾಧಿಕಾರದ ಉಪಾಧ್ಯಕ್ಷರು ಶ್ರೀ ಎಸ್.ಟಿ. ಸೋಮಶೇಖರ್, ಮಾನ್ಯ ಸಚಿವರು ಹಾಗೂ ಪ್ರಾಧಿಕಾರದ ಉಪಾಧ್ಯಕ್ಷರು


ಜಯವಿಭವ ಸ್ವಾಮಿ, ಭಾ.ಆ.ಸೇ., ಕಾರ್ಯದರ್ಶಿ,ಶ್ರೀಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರ, ಮಹದೇಶ್ವರ ಬೆಟ್ಟಶ್ರೀ ಸಿ.ನಾಗಯ್ಯ, ಹಣಕಾಸು ಮತ್ತು ಲೆಕ್ಕ ಪತ್ರ ಸಲಹೆಗಾರರು ಶ್ರೀ ಎಂ.ಬಸವರಾಜು ಉಪಕಾರ್ಯದರ್ಶಿಗಳು ಶ್ರೀ ಹೆಚ್.ಕುಮಾರ್, ತಾಂತ್ರಿಕ ಸಲಹೆಗಾರರು


ಶ್ರೀ ಆರ್.ಎಸ್.ಮನುವಾಚಾರ್ಯ ಸಹಾಯಕ ಅಭಿಯಂತರರು


ಶ್ರೀ ಕೆ.ಆರ್.ಪ್ರವೀಣ್ ಪಟೇಲ್ಲೆಕ್ಕಾಧೀಕ್ಷಕರು


ಶ್ರೀ ಎನ್.ಚಂದ್ರಶೇಖರ್, ಕಛೇರಿ ಅಧೀಕ್ಷಕರು (ಪ್ರಭಾರ)


ಸಿಬ್ಬಂದಿಗಳ ವಿವರ:

ಕ್ರಮ ಸಂಖ್ಯೆ ವಿಭಾಗಗಳು ಖಾಯಂ ಅನುಕಂಪ/ಕಾರ್ಯರ್ಥ ಸಂಭಾವನೆ ಹೊರಗುತ್ತಿಗೆ ಒಟ್ಟು
1. ಕಛೇರಿ ವಿಭಾಗ 29 3 7 39
2. ದೇವಸ್ಥಾನ ವಿಭಾಗ 37 11 4 52
3. ದಾಸೋಹ ವಿಭಾಗ 16 32 19 67
4. ಉತ್ಸವ ವಿಭಾಗ 4 - 6 10
5. ಸೇವಾ ವಿಭಾಗ - 1 1 2
6. ಲಾಡು ತಯಾರಿಕೆ ವಿಭಾಗ 11 18 15 44
7. ಲಾಡು ಮಾರಾಟ ವಿಭಾಗ 1 3 3 7
8. ಸ್ವಚ್ಚತೆ ವಿಭಾಗ 24 27 69 120
9. ಮಾಹಿತಿ ಕೇಂದ್ರ 2 1 5 8
10. ಪೆಟ್ರೋಲ್ ಬಂಕ್ 1 2 - 3
11. ಗುರುದರ್ಶಿನಿ 6 2 1 9
12. ನಾಗಮಲೆ ಭವನ 3 2 9 14
13. ಶಿವದರ್ಶಿನಿ 3 1 - 4
14. ಕುಠೀರ ವಿಭಾಗ 3 1 - 4
15. ಸಂಕಮ್ಮ ನಿಲಯ 5 1 - 6
16. ತೋಟದ ವಿಭಾಗ 5 8 10 21
17. ನೀರು ಸರಬರಾಜು ವಿಭಾಗ 8 2 18 28
18. ವಾರ್ತಾ ಕೇಂದ್ರ ಮೈಸೂರು 1 - 1 1
19. ಕಂದಾಯ ಇಲಾಖೆ, ಬೆಂಗಳೂರು 1 - - 1
20. ಬಸ್ ವಿಭಾಗ 15 37 - 52

ಭೌಗೋಳಿಕ ಸನ್ನಿವೇಶ:-

ಶ್ರೀ ಮಲೈ ಮಹದೇಶ್ವರ ಕ್ಷೇತ್ರವು ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ವ್ಯಾಪ್ತಿಗೆ ಒಳಪಟ್ಟಿದ್ದು, ಜಿಲ್ಲಾ ಕೇಂದ್ರದಿಂದ 120 ಕಿ.ಮೀ ದೂರದಲ್ಲಿರುತ್ತದೆ.

ಸಂಪರ್ಕ (ರಸ್ತೆ ಮೂಲಕ) :-

ಚಾಮರಾಜನಗರದಿಂದ 120ಕಿ.ಮೀ
ಕೊಳ್ಳೇಗಾಲದಿಂದ 80ಕಿ.ಮೀ
ಮೈಸೂರಿನಿಂದ 140ಕಿ.ಮೀ
ಬೆಂಗಳೂರಿನಿಂದ 225ಕಿ.ಮೀ
ತಮಿಳುನಾಡಿನ ಮೆಟ್ಟೂರಿನಿಂದ 50ಕಿ.ಮೀ
ಸೇಲಂನಿಂದ 100ಕಿ.ಮೀ
ಧರ್ಮಪುರಿಯಿಂದ 120ಕಿ.ಮೀ
ಈರೋಡಿನಿಂದ 120ಕಿ.ಮೀ


ಸಾರಿಗೆ ವ್ಯವಸ್ಥೆ:

ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರಕ್ಕೆ ಈ ಕೆಳಕಂಡ ಸಂಸ್ಥೆಯವರು ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.

ಕ್ರಮ ಸಂಖ್ಯೆ ಸಂಸ್ಥೆಯ ಹೆಸರು ಪ್ರತಿ ನಿತ್ಯ ಸಂಚರಿಸುವ ವಾಹನಗಳ ಸಂಖ್ಯೆ
1. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ 30
2. ತಮಿಳುನಾಡು ರಸ್ತೆ ಸಾರಿಗೆ ಸಂಸ್ಥೆ 20
3. ಶ್ರೀ ಮಲೆ ಮಹದೇಶ್ವರ ದೇವಾಲಯಕ್ಕೆ ಸೇರಿದ ಬಸ್ಸುಗಳು 5
4. ಖಾಸಗಿ ಬಸ್ಸುಗಳ ಮೂಲಕ 20


Development Photos


Brief History Of The Temple

The History of the Shrine Shri Male Mahadeshwara Swamy Temple has been extremely holly religious Institution and is famous from the time immemorial. As per Niranjana Rathnakara invisible Ganesha himself as Shri Male Mahadeshwara.

As mentioned in Janapada Mahakavya Shri Male Mahadeshwara is the son of the couple of Shri Chandrashekara Murthy and Smt. Uttarajamma and has descended to earth and has for the fist time seen near Shri Shailadha Mallikarjuna Linga, nearly 600 years ago; has come through Sutturu, Kunduru, then to the centre of Seven Hills; this place being felt to be comfortable desired to stay in the place of temple; and incarnation of Lord Eswara and kept tiger as his Vehicle. Travelled through the hills and the surroundings area, spent his childhood , youth and aged life in between the hills and on the basis of his yogi powers has displayed his various miracles.

He has transformed the life of the people belonging to Beda and Soliga Community and has solved the problems through his yogic powers and has converted the people by Lingadharana as Veerashaiva philosophy and he has placed the people belonging to Bedagampana alone should be allowed to perform puja and others to do ceremonies and religious activities and elevated from human beings to that of devatha and settled in the hearts of his devotees by accepting the offering of puja heartly and the persons staying in between the hills Shri Male Mahadeshwara Swamy.